ಮಂಗಳೂರು-ಡಿ.18: ರಾಜ್ಯದಾದ್ಯಂತ ಸುದ್ದಿಯಾಗಿದ್ದ ಬಂಟ್ವಾಳ ತಾಲೂಕಿನ ಕೊಳತ್ತಮಜಲು ಎಂಬಲ್ಲಿ ಈ ವರ್ಷ ಮೇ ತಿಂಗಳಲ್ಲಿ ಸಂಘ ಪರಿವಾರಕ್ಕೆ ಸೇರಿದ ಕಿರಾತಕರಿಂದ ಬರ್ಬರವಾಗಿ ಹತ್ಯೆಯಾದ ಸ್ಥಳೀಯ ನಿವಾಸಿ ಅಬ್ದುಲ್ ರಹ್ಮಾನ್ ರವರ ಕೊಲೆ ಪ್ರಕರಣದ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ಮತ್ತು ಸರಕಾರದ ವೈಫಲ್ಯದ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ನಾಳೆ ಶುಕ್ರವಾರದಂದು ಮಂಗಳೂರಿನ ಕ್ಲಾಕ್ ಟವರ್ ಬಳಿ ಬ್ರಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
ರಾಜ್ಯದಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿದ್ದ ಘಟನೆಯಿಂದ ಜಿಲ್ಲೆಯ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಸರಕಾರ ಮತ್ತು ಪೊಲೀಸ್ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ಗೊಂಡಿತ್ತು, ಅಂದಿನ ಘಟನೆಯ ಕಾರಣದಿಂದ ಜಿಲ್ಲೆಯ ಉನ್ನತ ಪೊಲೀಸ್ ಅಧಿಕಾರಿಗಳ ತಲೆದಂಡವೂ ಆಗಿ ಹೊಸ ಅಧಿಕಾರಿಗಳನ್ನು ಮುಖ್ಯಮಂತ್ರಿಗಳೇ ಆಸಕ್ತಿ ವಹಿಸಿ ನೇಮಿಸಿದ್ದರು. ಬಳಿಕ ಬಂಟ್ವಾಳ ಡಿವೈಎಸ್ಪಿ ನೇತೃತ್ವದ ವಿಶೇಷ ತಂಡ ರಚಿಸಿದ್ದರು. ಪ್ರಮುಖ ಆರೋಪಿಯನ್ನು ಬಂಧಿಸಲು ಕೆಲವು ತಿಂಗಳುಗಳು ಕಳೆಯಿತು. ಅದು ಆರೋಪಿ ಬೇರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟಿಗೆ ಹಾಜರಾದ ಸಂದರ್ಭದಲ್ಲಾಗಿತ್ತು ಪೊಲೀಸರು ವಶಕ್ಕೆ ಪಡೆದದ್ದು. ಬಳಿಕ ಸಾರ್ವಜನಿಕರ ಒತ್ತಡದಿಂದ ಮುಜಗರಕ್ಕೆ ಒಳಗಾದ ಸರಕಾರ ಕೊನೆಗೆ ಆರೋಪಿಗಳ ಮೇಲೆ ಕೋಕಾ ಕಾಯ್ದೆಯನ್ನು ಹಾಕಿತ್ತು. ಆದರೆ ಸರಕಾರ ಮತ್ತು ಪೊಲೀಸ್ ಇಲಾಖೆಯ ವೈಫಲ್ಯದಿಂದ ಕೋಕಾ ಪ್ರಕರಣವನ್ನು ದಾಖಲಿಸಲು ನ್ಯಾಯಾಲಯವು ನಿರಾಕರಿಸಿತು. ಇದು ಸಾರ್ವಜನಿಕ ವಲಯ ಸಾಮಾಜಿಕ ಜಾಲತಾಣಗಳಲ್ಲಿ ಸರಕಾರದ ವಿರುದ್ಧ ತೀವ್ರ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತವಾಗಿದೆ. ಆರೋಪಿ ಸ್ಥಾನದಲ್ಲಿ ಮುಸ್ಲಿಮರ ಹೆಸರು ಇದ್ದರೆ ಯುಎಪಿಎ ಯಂತಹ ಕರಾಳ ಕಾನೂನು ಹೇರಲು ಆಸಕ್ತಿ ಪಡುವ ಸರಕಾರ ಆರೋಪಿಗಳು ಸಂಘ ಪರಿವಾರಕ್ಕೆ ಸೇರಿದವರಾದರೆ ಮೃದು ದೋರಣೆ ವಹಿಸುತ್ತಿರುವುದು ಸರಕಾರದ ತಾರತಮ್ಯ ಮತ್ತು ಹೊಂದಾಣಿಕೆಯ ಭಾಗ ಎಂಬುವುದು SDPI ಪಕ್ಷ ಸೇರಿದಂತೆ ಪ್ರಗತಿಪರ ಸಂಘಟನೆಗಳ ವಾದವಾಗಿತ್ತು.
ಈ ಘಟನೆಯಲ್ಲಿ ಸರಕಾರ ಮತ್ತು ಇಲಾಖೆಯ ವೈಫಲ್ಯ ಹಾಗೂ ತಾರತಮ್ಯ ನೀತಿಯ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಶುಕ್ರವಾರ ಸಂಜೆ ಮಂಗಳೂರಿನ ಕ್ಲಾಕ್ ಟವರ್ ಬಳಿ ಆಯೋಜಿಸಿದ ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲಾ ಸಮಾನ ಮನಸ್ಕರು ಪಕ್ಷಭೇದ, ಜಾತಿಭೇದ ಮರೆತು ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು SDPI ಜಿಲ್ಲಾ ಪ್ರದಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಮಾಧ್ಯಮ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ








