Shopping cart

Magazines cover a wide array subjects, including but not limited to fashion, lifestyle, health, politics, business, Entertainment, sports, science,

  • Home
  • Breaking News
  • ಬಾಡಿಗೆಗಿದ್ದ ದಂಪತಿಯಿಂದ ಮನೆ ಮಾಲೀಕರ ಹತ್ಯೆ, ಸೂಟ್​ಕೇಸ್​ನಲ್ಲಿ ತುಂಡು ತುಂಡಾದ ದೇಹ ಪತ್ತೆ
Breaking News

ಬಾಡಿಗೆಗಿದ್ದ ದಂಪತಿಯಿಂದ ಮನೆ ಮಾಲೀಕರ ಹತ್ಯೆ, ಸೂಟ್​ಕೇಸ್​ನಲ್ಲಿ ತುಂಡು ತುಂಡಾದ ದೇಹ ಪತ್ತೆ

Email :24

ಕಳೆದ ಐದಾರು ತಿಂಗಳುಗಳಿಂದ ಬಾಡಿಗೆ ಪಾವತಿಸದ ಬಾಡಿಗೆದಾರರು ಕೊನೆಗೆ ಮನೆ ಮಾಲೀಕರನ್ನೇ ಕೊಲೆ(Murder) ಮಾಡಿರುವ ಘಟನೆ ಗಾಜಿಯಾಬಾದ್​ನ ರಾಜನಗರದಲ್ಲಿ ನಡೆದಿದೆ. ಔರಾ ಚಿಮೆರಾ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ. ಕೊಲೆಯ ನಂತರ, ಆರೋಪಿ ದಂಪತಿ ಮಹಿಳೆಯ ದೇಹವನ್ನು ತುಂಡು ಮಾಡಿ ಹಾಸಿಗೆಯ ಕೆಳಗೆ ಸೂಟ್‌ಕೇಸ್‌ನಲ್ಲಿರಿಸಿದ್ದರು ಎಂದು ಆರೋಪಿಸಲಾಗಿದೆ. ಮಹಿಳೆ ಹಲವು ಗಂಟೆಗಳ ಕಾಲ ಕಾಣಿಸದ ಕಾರಣ ಅಕ್ಕಪಕ್ಕದ ಮನೆಯವರಿಗೆ ಅನುಮಾನ ಬಂದಿತ್ತು.

ಗಾಜಿಯಾಬಾದ್, ಡಿಸೆಂಬರ್ 18: ಕಳೆದ ಐದಾರು ತಿಂಗಳುಗಳಿಂದ ಬಾಡಿಗೆ ಪಾವತಿಸದ ಬಾಡಿಗೆದಾರರು ಕೊನೆಗೆ ಮನೆ ಮಾಲೀಕರನ್ನೇ ಕೊಲೆ ಮಾಡಿರುವ ಘಟನೆ ಗಾಜಿಯಾಬಾದ್​ನ ರಾಜನಗರದಲ್ಲಿ ನಡೆದಿದೆ. ಔರಾ ಚಿಮೆರಾ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ. ಕೊಲೆಯ ನಂತರ, ಆರೋಪಿ ದಂಪತಿ ಮಹಿಳೆಯ ದೇಹವನ್ನು ತುಂಡು ಮಾಡಿ ಹಾಸಿಗೆಯ ಕೆಳಗೆ ಸೂಟ್‌ಕೇಸ್‌ನಲ್ಲಿರಿಸಿದ್ದರು ಎಂದು ಆರೋಪಿಸಲಾಗಿದೆ. ಮಹಿಳೆ ಹಲವು ಗಂಟೆಗಳ ಕಾಲ ಕಾಣಿಸದ ಕಾರಣ ಅಕ್ಕಪಕ್ಕದ ಮನೆಯವರಿಗೆ ಅನುಮಾನ ಬಂದಿತ್ತು.

ಫ್ಲಾಟ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮಹಿಳೆ ಸಂಜೆ ಫ್ಲಾಟ್‌ಗೆ ಪ್ರವೇಶಿಸಿರುವುದು ಮಾತ್ರ ಕಂಡುಬಂದಿತ್ತು. ಆದರೆ ಆಕೆ ಒಮ್ಮೆಯೂ ಹೊರಗೆ ಹೋಗಿರಲಿಲ್ಲ. ಅನುಮಾನದ ಮೇರೆಗೆ ಸೊಸೈಟಿ ನಿವಾಸಿಗಳು ಬಾಡಿಗೆದಾರರ ಫ್ಲಾಟ್‌ಗೆ ಹೋಗಿ ಅಲ್ಲಿ ಪರಿಶೀಲಿಸಿದಾಗ ಮಹಿಳೆಯ ಶವ ಸೂಟ್‌ಕೇಸ್‌ನಲ್ಲಿ ತುಂಬಿರುವುದನ್ನು ಕಂಡುಕೊಂಡಿದ್ದಾರೆ. ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು ಆದರೆ ವಿಫಲರಾದರು

Advertisement

ಘಟನೆಯ ಬಗ್ಗೆ ವಿವರಗಳನ್ನು ನಂದಗ್ರಾಮ ಎಸಿಪಿ ಉಪಾಸನಾ ಪಾಂಡೆ ಹಂಚಿಕೊಂಡಿದ್ದು, ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿದರು. ಡಿಸೆಂಬರ್ 17ರಂದು ಬೆಳಗ್ಗೆ 11.15ರ ಸುಮಾರಿಗೆ, ಔರಾ ಚಿಮೇರಾ ಸೊಸೈಟಿಯಲ್ಲಿ ನಡೆದ ಕೊಲೆಯ ಬಗ್ಗೆ ಪಿಆರ್‌ವಿಗೆ ನಂದಗ್ರಾಮ್ ಪೊಲೀಸ್ ಠಾಣೆಯಲ್ಲಿ ಮಾಹಿತಿ ಸಿಕ್ಕಿತು.

ವಿಚಾರಣೆ ಮತ್ತು ತನಿಖೆಯ ನಂತರ, ರಾಜನಗರದ ಔರಾ ಚಿಮೇರಾ ಸೊಸೈಟಿಯ ಎಂ -105 ನಿವಾಸಿ ಉಮೇಶ್ ಶರ್ಮಾ ಅವರ ಪತ್ನಿ ದೀಪ್ ಶಿಖಾ ಶರ್ಮಾ ಬಾಡಿಗೆ ಸಂಗ್ರಹಿಸಲು ಮತ್ತೊಂದು ಫ್ಲಾಟ್‌ಗೆ ಹೋಗಿದ್ದರು ಎಂಬುದು ತಿಳಿದುಬಂದಿತ್ತು. ತಡರಾತ್ರಿಯವರೆಗೆ ಅವರು ಹಿಂತಿರುಗದಿದ್ದಾಗ, ಅವರ ಕೆಲಸದಾಕೆ ಅನುಮಾನಗೊಂಡು ಫ್ಲಾಟ್‌ಗೆ ಹೋಗಿದ್ದಾರೆ.

ತಪಾಸಣೆಯಲ್ಲಿ, ದೀಪ್ ಶಿಖಾ ಶರ್ಮಾ ಅವರ ಶವ ಸೂಟ್​ಕೇಸ್​ನಲ್ಲಿ ಇರುವುದು ಕಂಡು ಬೆಚ್ಚಿಬಿದ್ದಿದ್ದಾರೆ. ಆರೋಪಿಗಳಾದ ಬಾಡಿಗೆದಾರರು ಅಜಯ್ ಗುಪ್ತಾ ಮತ್ತು ಆಕೃತಿ ಗುಪ್ತಾ ಅವರಿಬ್ಬರೂ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಕುಟುಂಬ ಸದಸ್ಯರಿಂದ ಹೇಳಿಕೆಗಳನ್ನು ಸ್ವೀಕರಿಸಲಾಗಿದ್ದು, ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ. ಮುಂದಿನ ಕಾನೂನು ಕ್ರಮಗಳು ನಡೆಯುತ್ತಿವೆ ಎಂದು ಅವರು ಹೇಳಿದರು. ಈ ದಂಪತಿ ಕಳೆದ ಐದಾರು ತಿಂಗಳಿನಿಂದ ಬಾಡಿಗೆ ಹಣ ಕೊಟ್ಟಿರಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *

Related Posts