Shopping cart

Magazines cover a wide array subjects, including but not limited to fashion, lifestyle, health, politics, business, Entertainment, sports, science,

  • Home
  • Breaking News
  • ಗಂಜಿಮಠ | ತಂದೆ ಮತ್ತು ಅಪ್ರಾಪ್ತ ಮಗಳಿಗೆ ಸಂಘಪರಿವಾರದ ಸಂಘೀ ಉಗ್ರರಿಂದ ಹಲ್ಲೆ; ಆರೋಪ
Breaking News

ಗಂಜಿಮಠ | ತಂದೆ ಮತ್ತು ಅಪ್ರಾಪ್ತ ಮಗಳಿಗೆ ಸಂಘಪರಿವಾರದ ಸಂಘೀ ಉಗ್ರರಿಂದ ಹಲ್ಲೆ; ಆರೋಪ

Email :6

ಗಂಜಿಮಠ: ಸಮಾರಂಭಕ್ಕೆ ಬಿಲ್ ಸಹಿತ ದನದ ಮಾಂಸಕೊಂಡು ಹೋಗುತ್ತಿದ್ದ ಅಪ್ರಾಪ್ತ ಮಗಳು ಹಾಗೂ ತಂದೆಗೆ ಸಂಘಪರಿವಾರದ ಭಯೋತ್ಪಾದಕರು ಹಲ್ಲೆ ನಡೆಸಿದ್ದಾರೆನ್ನಲಾದ ಘಟನೆ ಗಂಜಿಮಠ ನಾರ್ಲ ಪದವು ಎಂಬಲ್ಲಿ ವರದಿಯಾಗಿದೆ.

ಗಾಯಗೊಂಡವರನ್ನು ಮುಲ್ಲರಪಟ್ನ ನಿವಾಸಿ ಸತ್ತಾ‌ರ್ ಹಾಗೂ ಅವರ 10 ವರ್ಷದ ಮಗಳು ಎಂದು ತಿಳಿದು ಬಂದಿದೆ.ಸತ್ತಾರ್ ಅವರು ಮಗಳೊಂದಿಗೆ ತನ್ನ ದ್ವಿಚಕ್ರ ವಾಹನದಲ್ಲಿ ಕಾರ್ಯಕ್ರಮವೊಂದಕ್ಕೆ ಬಿಲ್ ನೊಂದಿಗೆ ದನದ ಮಾಂಸವನ್ನು ಕೊಂಡುಹೋಗುತ್ತಿದ್ದರು ಎನ್ನಲಾಗಿದೆ. ಅವರು ನಾರ್ಲಪದವು ಮುಟ್ಟುತ್ತಿದಂತೆ ಬುಲೆರೊ ಕಾರಿನಲ್ಲಿ ಹಿಂಬಾಳಿಸಿಕೊಂಡು ಬಂದ ಸಂಘಪರಿವಾರದಉಗ್ರರು ಅವರ ದ್ವಿಚಕ್ರ ವಾಹನಕ್ಕೆ ಅಡ್ಡಗಟ್ಟಿ ಏಕಾಏಕಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರನ್ನು ತಡೆಯಲು ಯತ್ನಿಸಿದ ಅವರ 10ವರ್ಷದ ಅಪ್ರಾಪ್ತ ವಯಸ್ಸಿನ ಪುತ್ರಿಯ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

Advertisement

ಈ ವೇಳೆ ಸತ್ತಾ‌ರ್ ಅವರು ಸ್ಥಳದಿಂದ ಓಡಿದ್ದು, ಅವರ ಮಗಳು ಅಲ್ಲೇ ಹತ್ತಿರ ಇದ್ದ ಮನೆಗೆ ಓಡಿ ಆಶ್ರಯ ಪಡೆದಳು ಎಂದು ತಿಳಿದು ಬಂದಿದೆ.

ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಸತ್ತಾ‌ರ್ ಮತ್ತು ಅವರ ಮಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ದೆ.ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಟ್ಟೆ ಪೊಲೀಸರು ಬಿಗಿ ಭದ್ರತೆಯನ್ನು ಏರ್ಪಡಿಸಿದ್ದಾರೆ. ಸ್ಥಳದಲ್ಲಿ ಕೆಎಸ ತುಕಡುಗಳನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ

ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಸತ್ತಾ‌ರ್ ಮತ್ತು ಅವರ ಮಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

Related Posts